Thursday 7 January 2016

ಪ್ರೀತಿ ಮತ್ತು ವಾಸ್ತವ


ಚೋಳರಾಜ್ , ಬಳ್ಳಾರಿ.
                                             
             ಇಂದು ನಾವು ಹೆಚ್ಚು ಮಾತನಾಡಲ್ಪಡುವ, ಯೋಚಿಸಲ್ಪಡುವ ಹಾಗೂ ಬರೆಯಲ್ಪಡುವ ವಿಷಯವೆಂದರೆ ಪ್ರೀತಿ.
“ಪ್ರೀತಿ ಎಂದರೇನು?” ಎಂಬುದಕ್ಕೆ ನಿಖರವಾದ ಉತ್ತರವನ್ನು ಕೊಡುವುದಕ್ಕಿಂತ ಅದನ್ನು ಅನುಭವಿಸುವುದು ಉತ್ತಮವಾದದ್ದು.    ಪ್ರೀತಿ ಎಂದರೆ, ಅದು ವರ್ಣಿಸಲು ಅಸಾಧ್ಯವಾದ ಒಂದು ಅನುಭವ.

                                ನಾವೆಲ್ಲರೂ ಇಂದು ನಿರಂತರ ವಾದ ಹಾರ್ಮೋನುಗಳ ಕಾಟಕ್ಕೆ ಒಳಗಾಗಿದ್ದೇವೆ. Smart Phone, T.V, Computer ಹಾಗೂ ವಿವಿಧ ರೀತಿಯ ಮಾಧ್ಯಮಗಳ ಮೋಹವನ್ನು ಹಲವಾರು ರೀತಿಯಲ್ಲಿ ತೋರಿಸುತ್ತವೆ.  ನಾವು ಅದನ್ನು ವೀಕ್ಷಿಸಿ, ಪ್ರೀತಿ ಮತ್ತು ಲೈಂಗಿಕತೆ ಬಗ್ಗೆ ನಮಗೆಲ್ಲವು ತಿಳಿದಿದೆ ಎಂದು ಭಾವಿಸುತ್ತೇವೆ.  ಆದರೆ ಅದು ಸುಳ್ಳು.

                            ಇಂದು ಜೀವಶಾಸ್ತ್ರ ಹಾಗೂ ಮನಃಶಾಸ್ತ್ರಗಳು ಯಾವ ಗಂಡಸನೂ 100% ಗಂಡಸಲ್ಲ ಹಾಗೂ ಯಾವ ಹೆಂಗಸೂ 100% ಹೆಂಗಸಲ್ಲ ಎಂದು ಸಮರ್ಥಿಸಿ ತೋರಿಸಿದೆ.  ಯಾಕೆಂದರೆ ನಾವು ನಮ್ಮ ತಂದೆ & ತಾಯಿಯ ಮೂಲಾಧಾರದಿಂದ ಜನಿಸಿರುವಾಗ ನಾವು 100% ಗಂಡು ಅಥವಾ 100% ಹೆಣ್ಣಾಗಿರಲೂ ಹೇಗೆ ಸಾಧ್ಯ.  ಎರಡರ ಗುಣಗಳು ನಮ್ಮಲ್ಲಿ ಇರಲೇಬೇಕು! ಇರುತ್ತವೇ ಕೂಡ!! ಹಾಗಾಗಿ ನಾವು ಕೆಲವು ಹೆಂಗಸರಿಗೆ ಗಂಡುಬೀರಿ ಎಂದು ಅಡ್ಡ ಹೆಸರು ಹಾಗೂ ಗಂಡಸರಲ್ಲಿ ಹೆಣ್ಣಿನ ಲಕ್ಷಣಗಳು ಕಂಡುಬರುತ್ತವೆ.  ಅದಕ್ಕೆ ನಾವು ಶಿವನಿಗೆ ಅರ್ಧನಾರೀಶ್ವರ  ಎಂದು ಇದೇ ತತ್ವದ ಮೇಲೆ ಕರೆಯಲಾಗಿದೆ. (ಅರ್ಧ    ನಾರಿ (ಹೆಣ್ಣು)+ ಈಶ್ವರ(ಗಂಡು)= ಅರ್ಧನಾರೀಶ್ವರ)

     ಈ ವಿಭಿನ್ನ ಗುಣಗಳು ಯಾಕೆ ಹೊರಗೆ ಬರುವುದಿಲ್ಲ ಎಂದರೆ, ಸಮಾಜವು ಹುಡುಗರಿಗೆ ತಮ್ಮ ಹೆಣ್ಣು ಗುಣಗಳನ್ನು ಹಾಗೂ ಹುಡುಗಿಯರಿಗೆ ತಮ್ಮ ಗಂಡಿನ ಗುಣಗಳನ್ನು ವ್ಯಕ್ತಪಡಿಸಲು ಬಿಡುವುದಿಲ್ಲ.  ಚಿಕ್ಕಂದಿನಿಂದಲೇ ಜೀವಾತ್ಮದ ಅರ್ಧಭಾಗವನ್ನು ಒತ್ತಿಡಲಾಗುತ್ತದೆ.  ಹಾಗಾಗೀ, ಗಂಡು ಮಕ್ಕಳಿಗೆ ಆಟದ ಸಾಮಾನುಗಳು “ರೇಸ್ ಕಾರುಗಳು, ರಾಕೆಟ್” ಗಳು ಇದ್ದರೆ, ಹೆಣ್ಣು ಮಕ್ಕಳಿಗೆ “ಅಡುಗೆ ಮನೆ”  ಆಟದ ಸಾಮಾನುಗಳ ಜೊತೆ ಆಡಲು ಪ್ರೋತ್ಸಾಹಿಸುತ್ತಾರೆ.

  ಹೀಗಾಗಿ, ಗಂಡು ತನ್ನ ದೇಹದಲ್ಲಿ ಕಳೆದು ಹೋಗಿರುವ ಹೆಣ್ಣನ್ನು, ಅಂದರೆ ತನ್ನ ಒತ್ತಿಟ್ಟ ಅರ್ಧವನ್ನು ಹುಡುಕಲು ಪ್ರಾರಂಭಿಸುತ್ತಾನೆ.  ಹಾಗೆಯೇ ಹೆಣ್ಣು ಕೂಡ ತನ್ನಲ್ಲಿರುವ ಅರ್ಧವನ್ನು ಹುಡುಕಲು ಪ್ರಾರಂಭವಾಗುತ್ತದೆ.  ಈ ಹುಡುಕಾಟವು ಮೊದಲು ನೋಟವಾಗಿ ಪ್ರಾರಂಭವಾಗಿ, ಪ್ರೀತಿಯಾಗಿ, ಲೈಂಗಿಕತೆಯ ಕಲ್ಪನೆಯಾಗಿ ಪ್ರಾರಂಭವಾಗುತ್ತದೆ.

                     ಮನಃಶಾಸ್ತ್ರದ ಪ್ರಕಾರ  ಮಗು 7-14 ವರ್ಷಗಳ ಕಾಲ ತಂದೆ-ತಾಯಿಯೊಡನೆ ತುಂಬಾ ಅನೋನ್ಯತೆಯಿಂದ ಇರುತ್ತದೆ. ಈ ವಯಸ್ಸಲ್ಲಿ ಮಗುವು ಸೂಕ್ತ ಹೆಣ್ಣು ಅಥವಾ ಗಂಡು ಹೇಗಿರಬೇಕೆಂಬ ಪ್ರತಿಬಿಂಬಗಳನ್ನು ಸಂಗ್ರಹಿಸುತ್ತಾರೆ.   14ನೇ ವಯಸ್ಸಿನಲ್ಲಿ ತಂದೆ-ತಾಯಿಯರೊಂದಿಗೆ ಅನೋನ್ಯತೆಯಿಂದ ರಲು ಸಮಾಜ ಬಿಡುವುದಿಲ್ಲ.   ಇವರು ಮಾಡುವ ಕೆಲಸಗಳು ಕೂಡ ಬೇರೆ ಬೇರೆ, ಹಾಗೂ ಇವರ ತಂದೆ –ತಾಯಿಯರು ಕೂಡ ಹಿಂದೆ ಕಳೆಯುತ್ತಿದ್ದ ಸಮಯವನ್ನು ಮಕ್ಕಳ ಜೊತೆ ಕಳೆಯುವುದಿಲ್ಲ.  ಹಾಗಾಗಿ ಈ ವಯಸ್ಸಿನಲ್ಲಿ ಹೆಣ್ಣು / ಗಂಡು ಪ್ರತಿಬಿಂಬವನ್ನು ಕಲ್ಪಸಿಕೊಂಡು ಪ್ರತಿಯೊಬ್ಬ ವ್ಯಕ್ತಿಯಿಂದಲೂ ಚೆನ್ನಾಗಿರುವ ಮೂಗು, ಕಣ್ಣು, ಒಳ್ಳೆಯ ರೂಪ ಎಲ್ಲಾವನ್ನು ಸಂಗ್ರಹಿಸಿ ನಮ್ಮ ಸ್ವಂತದ ಪರಿಪೂರ್ಣ ವ್ಯಕ್ತಿಯನ್ನು ಸೃಷ್ಟಿಸುತ್ತದೆ.

    20-21 ನೇ ವಯಸ್ಸಿಗೆ ಬಂದ ಮೇಲೆ  ಸಂಗ್ರಹಿಸಿದ ವ್ಯಕ್ತಿಯ ಹುಡುಕಾಟ,  ಹುಡುಕಾಟದಿಂದ ಅಪೇಕ್ಷೆಗಳು ಆರಂಭವಾಗುತ್ತವೆ.  ಅವರು ಸಂಗ್ರಹಿಸಿದ ಪ್ರತಿಬಿಂಬವನ್ನು ಸೂಕ್ತವಾದ ವ್ಯಕ್ತಿಯನ್ನು ಹುಡುಕಲು ಆರಂಭಿಸುತ್ತಾರೆ.  ಅಂದರೆ ಪ್ರೀತಿಗಾಗಿ ಹುಡುಕಾಟ ಆರಂಭವಾಗುತ್ತದೆ.

ಸಣ್ಣ ಕಥೆ:
ಪಾರ್ಕ್ ನಲ್ಲಿ  ಪ್ರತಿದಿನ   ತೊಂಭತ್ತು  ವರ್ಷದ  ಮುದುಕ ಕುಳಿತು  ಏನನ್ನೋ ನೋಡುತ್ತಿರುತ್ತಾನೆ.  “ಇದನ್ನು ಗಮನಿಸಿದ ಮತ್ತೊಬ್ಬ ವ್ಯಕ್ತಿ ಬಂದು ಕೇಳುತ್ತಾನೆ.”    ನೀನಿಲ್ಲಿ ಪ್ರತಿದಿನ ಕುಳಿತು ನಿಜವಾಗಿ ಏನನ್ನೂ ಮಾಡುತ್ತೀಯಾ ?
‘ಮುದುಕ ಉತ್ತರಿಸುತ್ತಾನೆ, “ನನ್ನ ಹೆಂಡತಿ ಯಾಗಲು ಒಬ್ಬ ಹೆಂಗಸನ್ನು ಹುಡುಕುತ್ತಿದ್ದೇನೆ”
ಈ ಉತ್ತರವನ್ನು ಕೇಳಿ  ಆ ಮನುಷ್ಯನಿಗೆ  ಆಶ್ಚರ್ಯವಾಯಿತು.
“” ನಿನ್ನ ಯೌವನದಲ್ಲಿ ನೀನೇಕೆ ಹುಡುಕಲಿಲ್ಲ ? “”
ಮುದುಕ ಉತ್ತರಿಸಿದನು “ ನನ್ನ ಮೂವತ್ತರ ವಯಸ್ಸಿನಿಂದ ಹುಡುಕುತ್ತಲೇ ಬಂದಿದ್ದೇನೆ”
ಆ ಮನುಷ್ಯ ಬೆರಗಾಗಿ ಕೇಳಿದನು!!
“”ಯಾವ ತರಹದ ಹೆಂಗಸನ್ನು ನೀನು ಹುಡುಕುತ್ತಿದ್ದೀಯಾ?””
ಮುದುಕ ಉತ್ತರಿಸಿದನು  “” ಒಬ್ಬ ಪರಿಪೂರ್ಣ ಹೆಂಗಸನ್ನು ಹುಡುಕುತ್ತಿದ್ದೇನೆ. “”
 ಹಾಗಾದರೇ ನೀವಿನ್ನು ಅಂಥವಳನ್ನು ಕಂಡಿಲ್ಲವೇ ?
ಮುದುಕನು ಉತ್ತರಿಸಿದನು, “” ನನ್ನ ಮನಸ್ಸಿಗೆ ಒಪ್ಪುವಂಥವಳನ್ನು ನಾನು ಸಂಧಿಸಿದ್ದೆ, ಆದರೆ ಸರಿಹೋಗಲಿಲ್ಲ””    ಯಾಕೆಂದರೆ
 “” ಅವಳು ಕೂಡ ಪರಿಪೂರ್ಣ ಪುರುಷನನ್ನು ಹುಡುಕುತ್ತಿದ್ದಳು””  ☺           
(ನಮ್ಮೋಳಗೆ ಇಟ್ಟುಕೊಂಡು ಹೋಗುವ ಪ್ರತಿಬಿಂಭಕ್ಕೆ ಸರಿ ಹೊಂದುವಂತಹ ವ್ಯಕ್ತಿಯನ್ನು ಹುಡುಕಲು ಪ್ರಯತ್ನಿಸಿದಾಗ ಹೀಗೆಯೇ ಆಗುತ್ತದೆ.)


          “ ಬಹುಕಾಲದ ಹುಡುಕಾಟದ ನಂತರ  ಇದ್ದಕ್ಕಿದ್ದಹಾಗೆ ನಮ್ಮ ಮನಸಿನಲ್ಲಿರುವ ಪ್ರತಿಬಿಂಬಕ್ಕೆ ಸರಿ ಹೊಂದುವಂತಹ ವ್ಯಕ್ತಿಯನ್ನು ಕಂಡುಕೊಳ್ಳುತ್ತೇವೆ.  ಆಗ  ಇಬ್ಬರೂ ನೋಡುವಂತಹ ನೋಟವು  ಹಸಿರಾಗಿ ಕಾಣುತ್ತದೆ. ಅಂದರೆ ಅವರಿಬ್ಬರ ಪ್ರತಿಬಿಂಬದಲ್ಲಿ ಸಾಮ್ಯತೆ ಕಂಡು ಬಂದ ಹಾಗೆ ಕಾಣುತ್ತದೆ.   ಈ ಸಂದರ್ಭದಲ್ಲಿ ಸಂಧಿಸುವುದಕ್ಕೆ ನಾವು “ಪ್ರೀತಿಯಲ್ಲಿ ಬೀಳುವುದು” (Falling in Love) ಎಂದು ಕರೆಯುತ್ತೇವೆ.  ಇದೇ ಪ್ರೀತಿಯಲ್ಲಿ ಬೀಳುವುದರ ಹಿಂದಿರುವ ವಾಸ್ತವ.

     ಪ್ರೀತಿಯಲ್ಲಿ ಬಿದ್ದ ಮೇಲೆ ನಮ್ಮ ಹುಡುಕಾಟ ಮುಗಿಯಿತು! ಈ ಹಂತದಲ್ಲೆ ನಾವು ಕವಿತೆಗಳನ್ನು ಬರೆಯುವುದು, ಚಿತ್ರಗಳನ್ನು ಬಿಡಿಸುವುದು, ಇನ್ನಿತರಗಳನ್ನು ಮಾಡುವುದು.
    ಇಬ್ಬರ ನಡುವೆ ಅಂತರವನ್ನು ಇಟ್ಟುಕೊಳ್ಳುವರೆಗೂ ಎಲ್ಲಾವೂ ಚೆನ್ನಾಗಿ ನಡೆಯುತ್ತದೆ. ಒಬ್ಬರ  ಮೇಲೆ ಒಬ್ಬರು ತಮ್ಮ ಕಲ್ಪನೆಯನ್ನು ಬಿಂಬಿಸುತ್ತಾರೆ.  ಆದರೆ ನಿಧಾನವಾಗಿ ಆ ವ್ಯಕ್ತಿಯು ಹತ್ತಿರವಾಗುತ್ತಾನೆ. ಆಗ ನಾವು ಹಸಿರೆಂದು ನೋಡಿದ್ದು ಅಷ್ಟು ಹಸಿರಾಗಿರಲ್ಲ, ನೋಡಿದಷ್ಟು ಹಸಿರಾಗಿರಲ್ಲ, ಕೇವಲ ಮಂಕಾದ ಹಸಿರು ಎಂದು ನಮಗೆ ಅನಿಸುತ್ತದೆ. ಇರಲಿ ಪರವಾಗಿಲ್ಲ ಎಂದು ಸಲ್ಪ ಮುಂದುವರೆಸುತ್ತೇವೆ. ಕೊನೆಗೆ ಗೊತ್ತಗುತ್ತದೆ ನಮ್ಮ ಕಲ್ಪನೆ ಸುಳ್ಳಾಯಿತು ಎಂದು. 
               ಪ್ರತಿಬಿಂಬದಿಂದ ಪ್ರಾರಂಭವಾದ ಪ್ರೀತಿ ಮುರಿಯುವ ಹಂತಕ್ಕೆ ಬಂದು ನಿಂತಿರುತ್ತದೆ. ನಂತರ ನಮ್ಮಷ್ಟಕ್ಕೆ ನಾವೇ ಸಮರ್ಥನೆ ಮಾಡಿಕೊಳ್ಳುತ್ತೇವೆ. ಇದೇ ಜೀವನ! ಜೀವನ ಇಷ್ಟೆ!! ಎಲ್ಲಾಪೂ ಸಂಪೂರ್ಣವಾಗಲೂ ಸಾಧ್ಯವಿಲ್ಲ!!! Etc..

    ಪ್ರೀತಿಯಲ್ಲಿ ತೇಲಾಡಿ, ಹರಟೆ ಮಾಡುವರೆಗೂ ಸಮಯವನ್ನು & ಚಿಕ್ಕದಾಗಿ ಅಂತರವನ್ನು ಇಟ್ಟುಕೊಳ್ಳುವರೆಗೂ ನಾವು ಚೆನ್ನಾಗಿರುತ್ತೇವೆ. ನಾವು ಒಂದು ಭ್ರಮೆಯ ಲೋಕದಲ್ಲಿರುತ್ತೇವೆ ಹೊರತು ಕಾರ್ಯಚರನೆಯ ಮಟ್ಟದಲ್ಲಿರುವುದಿಲ್ಲ. ತೇಲಾಟ ನಿಂತು ನಿಜವಾದ ಸಂಬಂಧವು ಆರಂಭವಾದಾಗ,  ಅಂತರವೂ ಕಡಿಮೆಯಾಗಿ ಅವರೊಂದಿಗೆ ಕಳೆಯುವ ಸಮಯವು ಹೆಚ್ಚಾದಾಗಲೇ ಸಮಸ್ಯೆ ಆರಂಬವಾಗುವುದು!  
   ಹೀಗಾಗಿ  “”ನಾವು ಯಾವುದನ್ನು ಪ್ರೀತಿ ಎಂದು ಕರೆಯುತ್ತೇವೆಯೋ ಅದು ಹೆಚ್ಚು ನೋವಿನಲ್ಲಿ ಅಂತ್ಯವಾಗುತ್ತದೆ.””

ಒಂದು ಸಣ್ನ ಕಥೆ:  
“ ಒಬ್ಬ ವ್ಯಕ್ತಿ ತನ್ನ ಗೆಳೆಯನಿಗೆ ಒಂದು ನಾಯಿಮರಿಯನ್ನು ಅವನ ಮದುವೆಯ ಉಡುಗೊರೆಯಾಗಿ ಕೊಟ್ಟನು.  3 ತಿಂಗಳ ನಂತರ ಆ ವ್ಯಕ್ತಿಯು ಅವನನ್ನು ದಾರಿಯಲ್ಲಿ ಭೇಟಿಯಾದನು”
ಆ ವ್ಯಕ್ತಿ ಕೇಳಿದನು, “” ಮದುವೆಯ ನಂತರ  ಜೀವನ ಹೇಗೆ ಸಾಗಿದೆ?’’
“” ಸಣ್ಣ-ಪುಟ್ಟ ಬದಲಾವಣೆಗಳಾಗಿವೆ ಅಷ್ಟೆ” ಎಂದು ಗೆಳೆಯನು ಉತ್ತರಿಸಿದನು.
“ ಏನು ಬದಲಾವಣೆಗಳು ಎಂದು ಕೇಳಿದನು ?
ಗೆಳೆಯ ಉತ್ತರಿಸಿದನು, “” ಮೊದಮೊದಲಿಗೆ  ನೀ ಕೊಟ್ಟ ನಾಯಿ ಮರಿಯೇ  ನನ್ನನ್ನು ನೋಡಿ ಬೊಗಳುತ್ತಿತ್ತು & ನನ್ನ ಹೆಂಡತಿ ನನಗೆ News Paper ತಂದು ಕೊಡುತ್ತಿದ್ದಳು.  ಈಗ ನನ್ನ ಹೆಂಡತಿ ನನ್ನನ್ನು ನೋಡಿ ಬೊಗಳುತ್ತಾಳೆ & ನಾಯಿಮರಿ News Paper ತಂದು ಕೊಡುತ್ತದೆ””

ಮದುವೆಯ ನಂತರ “Honeymoon”   ಮುಗಿದೊಡನೆ ಆಗುವುದು ಏನು??  Honey Sun!!!!!!!
ಹನಿಮೂನ್ ನ ಸಂತೋಷ ಕಡಿಮೆಯಾಗಲು ಕೇವಲ 15 ದಿನಗಳಷ್ಟೇ ಸಾಕು!!!
      “”” ನಾವು ಒಬ್ಬ ವಿಶ್ವ ಸುಂದರಿಯನ್ನೇ ಮದುವೆ ಯಾದರೂ ಕೂಡ ನಮ್ಮ ಕಣ್ಣುಗಳಲ್ಲಿ ಅವಳ ಸೌಂದರ್ಯವು ಕೇವಲ 15 ದಿನಗಳಲ್ಲಿ ಮಂಕಾಗುತ್ತದೆ.  ಏಕೆಂದರೇ ನಾವಿಗಾಗಲೇ ಬೇರೆಂದೊರ ಬಗ್ಗೆ ಭ್ರಮೆ ಪಡಲು ಆರಂಭಿಸಿರುತ್ತೇವೆ.  ನಾವು ಭ್ರಮೆ ಪಡುತ್ತಲೇ ಇರುತ್ತೇವೆ. ಯಾಕೆಂದರೆ, ನಾವು ನಮ್ಮೊಳಗೆ ಸಂತೃಪ್ತಿಗಾಗಿ ಹುಡುಕಾಡ್ತ ಇರ್ತೇವೆ.

  “”” ಒಬ್ಬ ಮಹಿಳೆ ತನ್ನ ಮಗಳಿಗೆ ಮದುವೆಯ ವಿಷಯದಲ್ಲಿ ಉಪದೇಶ ನೀಡುತ್ತಿದ್ದಳು,   ನೋಡು ಮಗಳೇ, ನೀನು ಯಾರನ್ನಾದರೂ ಪ್ರೀತಿಸಿದರೆ, ಅದು ಜೀವನ ಪರ್ಯಂತ  ಇರಬೇಕು, ಆಗಳೆ ಅದು ನಿಜವಾದ ಪ್ರೀತಿಯಾಗುವುದು.
    “” ಮಗಳು ತಾಯಿ ಹೇಳುತ್ತಿದ್ದನ್ನು ಕೇಳ್ತಾ ಇದ್ದಳು”
 ಆ ಮಹಿಳೆ ಮುಂದುವರೆಸಿದಳು  “ ನನ್ನ ಬುದ್ದಿ ಮಾತುಗಳನ್ನು ಕೇಳು, ನಾನು ಮಾತಾನಾಡುತ್ತಿರುವುದರ ಬಗ್ಗೆ ನನಗೆ ಗೊತ್ತಿದೆ, ಇಷ್ಟಾದರೂ ನಾನು ಮೂರು ಮದುವೆಯಾಗಿದ್ದೇನೆ.””


 ಇಲ್ಲಿ ಸಮಸ್ಯೆ ಏನೆಂದರೆ, ಎಲ್ಲಾರು ಬುದ್ದಿ ಮಾತುಗಳನ್ನು ಹೇಳಲು ಸಿದ್ದರಾಗಿದ್ದಾರೆ, ಆದರೆ ಯಾರು ಅದನ್ನು ತಗೆದುಕೊಳ್ಳು ತಯಾರಿಲ್ಲ !!
    “” ಜೀವನದಲ್ಲಿ ನಾವು ಕಲ್ಪಿಸುವ ಪ್ರತಿಬಿಂಬಗಳನ್ನು ಬಾಹ್ಯದಲ್ಲಿರುವ ನೈಜತೆಯೊಂದಿಗೆ ಸರಿಹೊಂದಿಸಲು ನಿರಂತರವಾಗಿ ಪ್ರಯತ್ನಿಸುತ್ತೇವೆ. ಅದಕ್ಕೆ ನಾವು Perfect Match ಕಾಣಲು  ಸಾಧ್ಯವಿಲ್ಲ. ನಾವು ಕಲ್ಪಿಸಿಕೊಂಡಿರುವ  ಪ್ರತಿಬಿಂಬಗಳನ್ನು ಬಿಟ್ಟು ಬಿಡಬೇಕು. ಆಗ ಅನಂತವಾದ ಸಾದ್ಯತೆಗಳನ್ನು ಜೀವನದಲ್ಲಿ ಕಾಣಬಹುದು.

  Finally,
Unmarried  ಆಗಿ ನಿಮ್ಮ ಭ್ರಮೆಗಳನ್ನು ಬಿಟ್ಟುಬಿಡಿ, “” ಆಗ ನೀವು ನಿಮ್ಮ ಜೀವನ ಸಂಗಾತಿಯನ್ನು ಆಯ್ದುಕೊಳ್ಳಬಹುದು, ಕನಸಿನ ಸಂಗಾತಿಯನ್ನಲ್ಲ.””


ಚೋಳರಾಜ್,  ಬಳ್ಳಾರಿ.